ನಮ್ಮ ಜೊತೆಗಿದ್ದ ರಾಮಚಂದ್ರ
ಅನೇಕ ಸಾರಿ ಕೆಲ ಸಮಯ ಅವರೊಂದಿಗೆ ಕೂತು ಮಾತನಾಡುವ ಚರ್ಚಿಸುವ ಅವಕಾಶಗಳು ನನಗೆ ದೊರೆಕಿದ್ದವು. ನಮ್ಮದೇನು ಅಂಥ ನಿಕಟವಾದ ಪರಿಚಯವಲ್ಲ.ಯಾವತ್ತೂ ನನಗೆ ಅವರು ಅಂಥ ನೋವಿನಲ್ಲಿದ್ದಿರಬಹುದಾದ ಬಗ್ಗೆ ಸಂಶಯ ಕೂಡಾ ಬಂದಿರಲಿಲ್ಲ. ಈ ಮನುಶ್ಯ ಒಂದರೆ ಕ್ಶಣ ಕೂಡ ತಮ್ಮ ನೋವನ್ನು ತೊರಿಸ್ತಿರಲಿಲ್ಲ. ತಲೆ ಬಗ್ಗಿಸ್ತೀನಿ ರಾಮಚಂದ್ರ ನಿಮಗೆ. ಯಾವತ್ತೂ ಒಂದೇ ಮಖ ಚರ್ಯೆ, ಸಂಭಾಶಣೆಯ ವೈಖರಿ. ಅದೇ ಮಾತಿನ ಚುರುಕು. ಚಿತ್ರ ಸಮೂಹದ ಸಂವಾದ ವಿಶ್ಲೇಶಣೆಗಳನ್ನು ಗಿರೀಶ್ ಅವರ ಜೊತೆ ಅವರು ನಡೆಸುತ್ತಿದ್ದ ರೀತಿ ಒಬ್ಬ ದೈಹಿಕವಾಗಿ ಅಸ್ವಸ್ಥನಾಗಿರುವ ಮನುಶ್ಯನದ್ದಂತೂ ಖಂಡಿತವಾಗಿರಲಿಲ್ಲ. ಇದು ಎಲ್ಲಿಯ ಶಕ್ತಿ ? ಕೆಲವರು ಸಾರ್ಥಕವಾಗಿ ಬದುಕಿ ತಮ್ಮ ಕೆಲಸ ಅಚ್ಚುಕಟ್ಟಾಗಿ ಮಾಡಿ ಸುಮ್ಮನೇ ಎದ್ದು ಹೋಗುತ್ತಾರೆ. "ನಾಳೆ ಮತ್ತೆ ಸಿಗೋಣ" ಎಂದು ಹೇಳುವ ಹಾಗೆ. ನನಗೆ ಈ ತರಹದ ನಿರ್ಭಾವುಕ ಪ್ರತಿಕ್ರಿಯೆ ಸಾವನ್ನೇ ಎದುರಾಳಿಯಾಗಿ ಸ್ವೀಕರಿಸುವ ಆಟದಂತೆ ಕಾಣಿಸುತ್ತದೆ. ಇಲ್ಲಿ ಸೆವೆಂತ್ ಸೀಲ್ ನೆನಪಾದರೆ ತಪ್ಪೇನಿಲ್ಲ. ಜೊತೆಗೆ ಕೂತು ಗುಂಡು ಹಾಕುತ್ತ ಪ್ರಪಂಚದ ಯಾವದೋ ಮೂಲೆಯ ಸಿನೆಮಾ ನಿರ್ದೇಶಕನ ರಾಜಕೀಯ, ಸಾಂಸ್ಕ್ರತಿಕ ಜಗತ್ತನ್ನು ಒಡೆಯಲು ತವಕಿಸುವ ನನಗೆ ನಮ್ಮ ನಡುವೆ ಸಣ್ಣಗೆ ಕೆನ್ಸರ್ ನಂಥ ಕಾಯಿಲೆಯಿಂದ ನರಳುವ ನಮ್ಮವರಲ್ಲೊಬ್ಬರ ನೋವಿನ ಸುಳುವೂ ಕೂಡಾ ಸಿಕ್ಕಿರಲಿಲ್ಲ.!! ಇದು ರಾಮಚಂದ್ರ ಅಂಥವರ ಅಪ್ಪಟ ಕೆಚ್ಚಿನ ವ್ಯಕ್ತಿತ್ವಕ್ಕೆ ಈಗ ಅವರ ಸಾವಿನ ನಂತರ ನನಗೆ ಸಿಕ್ಕ ಒಂದು ಸಣ್ಣ ಒಳಕಿಂಡಿ. ಕ್ಶಮಿಸಿ ರಾಮಚಂದ್ರ, ನಾವು ಒಂದೆರಡು ಗಳಿಗೆ ಮನುಶ್ಯನ ದೈಹಿಕ ನೋವಿನ ಬಗ್ಗೆ ಕೂಡಾ ಮಾತನಾಡಬಹುದಿತ್ತು. ಪ್ರತಿಯೊಬ್ಬರೂ ತಮ್ಮ ತಮ್ಮ ನೋವನ್ನು ತಾವೇ ಹೊರಬೇಕು ಅದು ಅನಿವಾರ್ಯ ಎಂಬುದು ನಿಜ. ಆದರೂ.... ಆದರೆ ನಾನು ನಿಮಗೆ ಯಾವತ್ತೂ ಅಸ್ಟು ಸಮೀಪದವನಾಗಿರಲಿಲ್ಲ. ನಮ್ಮ ಪರಿಚಯ ಸಿನೆಮಾದ ಮೂಲಕ ಮತ್ತು ಸಿನೆಮಾದ ಬಗ್ಗೆ ಇರುವ ಅಸಕ್ತಿಯಿಂದ ಹುಟ್ಟಿಕೊಂಡಿದ್ದು. ಕನ್ನಡ ಸಿನೆಮಾಕ್ಕೆ ನಿಮ್ಮ ಕಾಣಿಕೆ ಬಹಳ ದೊಡ್ಡದು. ಅದರ ಬಗ್ಗೆ ಬರೆಯಲು ಸಮರ್ಥರಿದ್ದಾರೆ. ನಾನು ಈ ನೊವಿನ ನಡುವೆ ಹೊಳೆವ ನಿಮ್ಮ ವ್ಯಕ್ತಿತ್ವದ ಹೊಸ ಬೆಳಕನ್ನು ಕಂಡು ಬೆರಗಾಗಿದ್ದೇನೆ. ಅದನ್ನಿಲ್ಲಿ ಹೇಳೋಣ ಅನ್ನಿಸಿತು. ಯಾರೋ ಹೇಳಿದ ಹಾಗೆ ಸಿನೆಮಾ ಮತ್ತು ಜೀವನಗಳಲ್ಲಿ ಆಯ್ಕೆ ಇದ್ದರೆ ಖಂಡಿತ ಅದು ಜೀವನದ ಪರವಾಗಿ ಇರಬೇಕು. ಅದನ್ನು ಕೆಲವರು ಎದುರಿಸುವ ರೀತಿ ಯಾವ ಸಿನೆಮಾವನ್ನೂ ಮೀರಿಸಬಲ್ಲದು. ಸಾಮಾಜಿಕ ಇಂಟರ್ ಆಕ್ಶ್ನಗಳಲ್ಲಿ ಯಾರಿಗೂ ಸುಳಿವೂ ಕೊಡದೆ ತಣ್ಣಗೆ ನೊರ್ಮಲ್ ಅನ್ನಿಸುವಂತೆ ನೋವನ್ನೆದುರಿಸುವ ಈ ಪರಿ ನಿಮ್ಮ ಬಗ್ಗೆ ತುಂಬ ಹೇಳುತ್ತದೆ. ಹೌದು ನಮ್ಮ ಜೊತೆಗಿದ್ದವರು ನೀವು. ಮತ್ತೆ ಸಿಗೋಣ ಅನ್ನದೇ ಹೊರಟಿರಿ. -Shrikant Prabhu...
ಶ್ರೀಕಾಂತ್, ನಿಮ್ಮ ಈ ಸಣ್ಣ ಬರಹ ಆ ವ್ಯಕ್ತಿಯ ಬಗ್ಗೆ ಬಹಳಷ್ಟು ಹೇಳಿ ಬಿಡುತ್ತದೆ.
ReplyDeleteಬರಹದ ನೈಜತೆ ನಿಜಕ್ಕೂ ಮನವ ತಟ್ಟಿತು.
ReplyDelete