| Code of Hammurabi |
ರಾಜಕೀಯ ಪದದ ಪರಿಕಲ್ಪನೆ
ಮನುಷ್ಯ
ಸ್ವಭಾವತಃ ರಾಜಕೀಯ ಪ್ರಾಣಿ – Man is a Political Animal:
ಇಲ್ಲಿ ಒಂದು ಮೂಲಭೂತವಾದ ಪ್ರಶ್ನೆ ಎದುರಾಗುತ್ತದೆ. ಚಲನಚಿತ್ರಗಳ ವಿಷಯ
ಮತ್ತು
ರೂಪಗಳಲ್ಲಿ ಸುಪ್ತವಾಗಿಯೂ, ವಾಚ್ಯವಾಗಿಯೂ ರಾಜಕೀಯ
ಬೆರೆತಿದೆ ಎಂದಾದರೆ, ಈ
ಪದದ
ಪರಿಕಲ್ಪನೆ ಏನು?
ಇದರ
ಬಗ್ಗೆ
ಸ್ವಲ್ಪ
ಮೆಲುಕು
ಹಾಕಿದರೆ, ನಾವು
ಮಾಡುವ
ಹಾಗೂ
ನೋಡುವ
ಸಿನಿಮಾಗಳಿಗೆ ಸ್ವಲ್ಪ
ಸ್ಪಷ್ಟತೆ ದೊರೆಯಬಹುದು.
ಸಾಮಾನ್ಯ ಯುಗ ಪೂರ್ವದ ೪ನೇ
ಶತಮಾನದಲ್ಲಿ ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ (Aristotle) ತನ್ನ ಪೊಲಿಟಿಕ್ಸ್ (Politics) ಎಂಬ ಪುಸ್ತಕದಲ್ಲಿ “Man is a Political Animal” ಎಂದು ಹೇಳುತ್ತಾನೆ. ಮನುಷ್ಯರು ಸ್ವಭಾವತಃ ಸಂಘಜೀವಿಗಳು; ಅವರು
ಸಮುದಾಯಗಳಲ್ಲಿ ವಾಸಿಸಲು ಬಯಸುತ್ತಾರೆ. ಮಾನವೀಯತೆಯ ಪರಿಪೂರ್ಣತೆಯನ್ನು ನಾವು
ಸಮುದಾಯದೊಳಗೆ ಮಾತ್ರವೇ ಅರಿತುಕೊಳ್ಳುತ್ತೇವೆ – ಸಾಮಾನ್ಯ ಒಳಿತಿಗಾಗಿ ಆಡಿದ
ನುಡಿ
ಮತ್ತು
ಇಟ್ಟ
ನಡೆಗಳ
ಮೂಲಕ.
ಅರಿಸ್ಟಾಟಲ್
ಪ್ರಕಾರ,
ರಾಜಕೀಯದಿಂದ ದೂರವಿರುವುದು ಎಂದರೆ
‘ಇಡಿಯೋಟಿಸ್’ (ಮೂರ್ಖರು) ಆಗಿರುವುದು – ಅಂದರೆ
ಸಾರ್ವಜನಿಕ ಜೀವನದಿಂದ ತನ್ನನ್ನು ಬೇರ್ಪಡಿಸಿಕೊಂಡಿರುವ ವ್ಯಕ್ತಿ.
ಈ ಅರ್ಥದಲ್ಲಿ, ಯಾರಾದರೂ “ಚಲನಚಿತ್ರಗಳಲ್ಲಿ ರಾಜಕೀಯ
ಹುಡುಕಬಾರದು” ಎಂದು
ಹೇಳಿದರೆ, ಅವರು
ಸಮಾಜ
ವಿರೋಧಿ
(anti-social) ಎಂದು
ಪರಿಗಣಿಸಲ್ಪಡುತ್ತಾರೆ; ಅರಿಸ್ಟಾಟಲ್ ಪ್ರಕಾರ,
ಮೂರ್ಖರಾಗಿ ಕಾಣಿಸಿಕೊಳ್ಳುತ್ತಾರೆ.
ತಿಕ್ಕಾಟ:
ನಮ್ಮಲ್ಲಿ ಇರುವದು ಸೀಮಿತ ಆರ್ಥಿಕ
ಮತ್ತು
ಸಾಂಸ್ಕೃತಿಕ ಸಂಪನ್ಮೂಲಗಳು. ಆದ್ದರಿಂದ, ನಾವು ನಮ್ಮ-ನಮ್ಮ
ಪಾಲುಗಳನ್ನು ದಕ್ಕಿಸಿಕೊಳ್ಳುವ ಭರದಲ್ಲೂ ಇರುತ್ತೇವೆ. ಅರಿಸ್ಟಾಟಲ್ (Aristotle) ಹೇಳಿದಂತೆ, ನಾವು
ಒಟ್ಟಾಗಿ ಬಾಳಲು
ಬಯಸುವ
ಸಾಮಾಜಿಕ ಜೀವಿಗಳಾದರೂ, ಈ
ನಿಟ್ಟಿನಲ್ಲಿ ನಮ್ಮ
ಸ್ವಂತಿಕೆಯನ್ನು ಕಾಪಾಡಿಕೊಳ್ಳುವ ಜೀವಿಗಳೂ ಹೌದು.
ಸಂಪನ್ಮೂಲಗಳ ನ್ಯಾಯಯುತ ಹಂಚಿಕೆಯಲ್ಲಿ ನಾವೆಲ್ಲರೂ ಒಟ್ಟಾಗಿ ಬದುಕಲೇಬೇಕಾದ ಅನಿವಾರ್ಯತೆ ಇದೆ; ಆದರೆ ಸ್ವಾರ್ಥ ಸಾಧನೆಯೂ ಇದೆ.
ಇದರೊಳಗೆ ನ್ಯಾಯ,
ಅಧಿಕಾರ,
ದಬ್ಬಾಳಿಕೆ ಮತ್ತು
ಹಿಂಸೆ
ಇತ್ಯಾದಿ ಅಂಶಗಳು
ಸೇರಿವೆ.
ಎರಡು
ವಿರುದ್ದ ದಿಕ್ಕುಗಳಿಗೆ ಎಳೆಯುವ
ಮಾನವಕುಲದ ಈ
ಸ್ವಭಾವಗಳ ಸಮ್ಮಿಲನದಲ್ಲೇ ಜೀವನ
ಅಡಗಿದೆ.
ಹೀಗಾಗಿ, ರಾಜಕೀಯ ಅಂದರೆ
ಶಿಸ್ತು
ಮತ್ತು
ಸ್ವಾತಂತ್ರ್ಯ, ಒಗ್ಗಟ್ಟು ಮತ್ತು
ಭಿನ್ನತೆ, ಅಧಿಕಾರ
ಮತ್ತು
ನ್ಯಾಯ
– ಇವುಗಳ
ನಡುವೆ
ಸಮತೋಲನ
ಕಾಯ್ದುಕೊಳ್ಳುವ ನಿರಂತರ
ಪ್ರಯತ್ನ. ರಾಜಕೀಯ
ಎಂಬ
ಪರಿಕಲ್ಪನೆ ಮೂರ್ತ
ರೂಪಕ್ಕೆ ಬರುವುದು ನಮ್ಮ
ಸ್ವಭಾವಗಳಲ್ಲಿ, ಈ
ತಿಕ್ಕಾಟಗಳ ಬಗ್ಗೆ
ನಮಗಿರುವ ನಿಲುವುಗಳಲ್ಲಿ.
ತಿಕ್ಕಾಟದ ಮೆಟಾ-ನೆರೇಟಿವ್ಗಳು (Meta-Narratives / ಮಹಾ
ಕಥನಗಳು)
“ನಮ್ಮನ್ನು ನಾವು
ಹೇಗೆ
ಆಳಿಕೊಂಡು ಬಾಳಬೇಕು?” ಅಥವಾ
“ನಾವೆಲ್ಲರೂ ನಮ್ಮತನವನ್ನು ಕಾಯ್ದುಕೊಂಡು ಒಟ್ಟಾಗಿ ಬದುಕಬೇಕಾದರೆ ನಿಯಮಗಳು ಮತ್ತು
ಮೌಲ್ಯಗಳು ಹೇಗಿರಬೇಕು? ಅವುಗಳ
ಆಡಳಿತ
ಹೇಗಿರಬೇಕು?” ಎಂಬ
ಪ್ರಶ್ನೆಗಳಿಗೆ ಎಲ್ಲರಿಗೂ ಒಪ್ಪಿಗೆಯಾಗುವ ಒಂದೇ
ಉತ್ತರವಿಲ್ಲ.
ಪ್ರತಿಯೊಂದು ರಾಜಕೀಯ ವ್ಯವಸ್ಥೆಯೂ, ಪ್ರತಿಯೊಂದು ಸಿದ್ಧಾಂತವೂ ಈ
ಪ್ರಶ್ನೆಗಳಿಗೆ ಬೇರೆ
ಬೇರೆ
ಉತ್ತರ
ನೀಡಲು
ಪ್ರಯತ್ನಿಸುತ್ತದೆ. ಮಾನವಕುಲದ ಆಡಳಿತವು ಇತಿಹಾಸಪೂರ್ವದಲ್ಲಿ ಅನೌಪಚಾರಿಕ, ರಕ್ತಸಂಬಂಧ ಆಧಾರಿತ
ರಚನೆಗಳಿಂದ ಆರಂಭವಾಗಿ, ವರ್ತಮಾನ ಯುಗದಲ್ಲಿ ಸಂಕೀರ್ಣ, ಜಾಗತೀಕರಣಗೊಂಡ ರಾಷ್ಟ್ರ-ರಾಜ್ಯಗಳಾಗಿ ವಿಕಸನಗೊಂಡಿದೆ. ಸಂಪನ್ಮೂಲ ನಿರ್ವಹಣೆ ಮತ್ತು
ಸಾಮಾಜಿಕ ಕ್ರಮಗಳ
ಅಗತ್ಯಗಳಿಂದ ಸಮಾಜವನ್ನು ನಡೆಸುತ್ತಿದೆ.
ಸಾಮಾನ್ಯ ಯುಗದ ಪೂರ್ವ ಸುಮಾರು
3,00,000 ವರ್ಷಗಳಿಂದ ಸುಮಾರು
10,000 ವರ್ಷಗಳವರೆಗೆ ಸಾಮಾಜಿಕ ಆಡಳಿತವು ಅನೌಪಚಾರಿಕವಾಗಿತ್ತು. 30–40 ಜನರ ಅಲೆಮಾರಿ ಬೇಟೆಗಾರ–ಸಂಗ್ರಹಕಾರ ಬುಡಕಟ್ಟು ಗುಂಪುಗಳಲ್ಲಿ ಸಾಮುದಾಯಿಕ ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ಕುಟುಂಬ
ಸಂಬಂಧಗಳೇ ನೆಲೆಯಾಗಿದ್ದವು. ಅಧಿಕಾರವನ್ನು ಹೆಚ್ಚಾಗಿ ಹಿರಿಯರು, ಗೌರವಾನ್ವಿತ ಬೇಟೆಗಾರರು ಅಥವಾ
ಸಮುದಾಯದ ಹಿರಿಯ
ವಿವೇಕವಂತ ಮಹಿಳೆಯರು ವಹಿಸುತ್ತಿದ್ದರು.
ಆರಂಭಿಕ
ನಾಗರಿಕತೆ:
ಸಾಮಾನ್ಯ ಯುಗ ಪೂರ್ವ ಸುಮಾರು
10,000 – 1,000 ವರ್ಷಗಳ
ಅವಧಿಯಲ್ಲಿ ಆರಂಭಿಕ
ನಾಗರಿಕತೆ ಹುಟ್ಟಿಕೊಂಡಿತು. ಕೃಷಿಯ
ಆಗಮನ
ಸ್ಥಿರ
ಜೀವನವನ್ನು ಅಗತ್ಯಗೊಳಿಸಿತು. ಇದರಿಂದ
ಖಾಸಗಿ
ಆಸ್ತಿ,
ಹೆಚ್ಚುವರಿ ಉತ್ಪಾದನೆ ಮತ್ತು
ರಕ್ಷಣೆಯ ಅಗತ್ಯ
ಉಂಟಾಯಿತು. ಆಗ
ರಾಜಪ್ರಭುತ್ವಗಳು
ಬೆಳೆಯಲು ಆರಂಭಿಸಿದವು.
ನಿಯಮಗಳು ಔಪಚಾರಿಕವಾದವು, ಕ್ರಮಬದ್ಧವಾದವು.
ಉದಾಹರಣೆಗೆ – ಪ್ರಾಚೀನ ಮೆಸೊಪೊಟೇಮಿಯಾದ (Mesopotamia) ಬ್ಯಾಬಿಲೋನ್
(Babylon) ರಾಜ
ಹಮ್ಮುರಾಬಿ (King Hammurabi) ಸಾಮಾನ್ಯ ಯುಗ
ಪೂರ್ವ
ಸುಮಾರು
1753ರಲ್ಲಿ
ಶಿಲೆಯಲ್ಲಿ ಕೆತ್ತಿದ ಕಾನೂನು
ಸಂಹಿತೆ,
ಹಮ್ಮುರಾಬಿಯ ಸಂಹಿತೆ (Code of Hammurabi). ಇದರಲ್ಲಿರುವ 282 ನಿಯಮಗಳಲ್ಲಿ ಒಂದು
ಹೀಗಿತ್ತು – “ಯಾರಾದರೂ ರಾಜದರ್ಬಾರದ ಅಥವಾ
ಸ್ವತಂತ್ರ ವ್ಯಕ್ತಿಯ ಗುಲಾಮರನ್ನು ನಗರದ
ದ್ವಾರಗಳ ಹೊರಗೆ
ಕರೆದುಕೊಂಡು ಹೋದರೆ,
ಅವರಿಗೆ
ಮರಣದಂಡನೆ ವಿಧಿಸಬೇಕು.”
ರಾಜನ ಅಪ್ಪಣೆಯೇ ಜನರು
ಸಾಮಾಜಿಕವಾಗಿ ಹೇಗಿರಬೇಕೆಂದು ನಿರ್ಧರಿಸುತ್ತಿತ್ತು.
ಪ್ರಾಚೀನ
ಯುಗ:
ಶಾಸ್ತ್ರೀಯ ಮತ್ತು ಪ್ರಾಚೀನ ಯುಗಗಳಲ್ಲಿ (ಸುಮಾರು
ಸಾಮಾನ್ಯ ಯುಗ
ಪೂರ್ವ
1000 – 500 ವರ್ಷಗಳ
ಅವಧಿಯಲ್ಲ) ಗ್ರೀಕ್ (Greek) ದೇಶದಲ್ಲಿ ನಾಗರಿಕರ ಭಾಗವಹಿಸುವಿಕೆಗೆ ಒತ್ತು
ನೀಡಿದ
ನಗರ-ರಾಜ್ಯಗಳು ಪೋಲಿಸ್
(City-State – Polis) ರೂಪುಗೊಂಡವು. ಎಥೆನ್ಸ್ (Athens) ನಗರ Demokratia ಅಂದರೆ ಜನರ
ಆಳ್ವಿಕೆಯನ್ನು ಅಳವಡಿಸಿಕೊಂಡರೆ, ಸ್ಪಾರ್ಟಾ (Sparta) ನಗರ Oligarchy ಆಗಿತ್ತು. ಒಲಿಗಾರ್ಕಿಯಲ್ಲಿ ಅಧಿಕಾರವು ಗಣ್ಯರೆನಿಸಿಕೊಂಡ, ಪೂರ್ಣ ಪ್ರಮಾಣದ ನಾಗರಿಕರ ಹಿಡಿತದಲ್ಲಿ ಕೇಂದ್ರೀಕೃತವಾಗಿತ್ತು; ಗುಲಾಮರ ಮೇಲೆ ನಿಯಂತ್ರಣಕ್ಕೆ ಆದ್ಯತೆ
ನೀಡಿದರು.
ರೋಮ್ (Rome) ರಾಜ್ಯವು ಯುರೋಪ್ (Europe)ನ ಹೆಚ್ಚಿನ ಭಾಗಗಳನ್ನು ಹಾಗೂ
ಮೆಡಿಟರೇನಿಯನ್ (Mediterranean) ಪ್ರದೇಶಗಳನ್ನು ತನ್ನದಾಗಿಸಿಕೊಂಡು ಮಹಾ
ಸಾಮ್ರಾಜ್ಯವಾಗಿ ಬೆಳೆದಿತ್ತು. ಅದು
ಅಭಿವೃದ್ದಿಗೊಳಿಸಿದ ಸಂಕೀರ್ಣ ಕಾನೂನು
ಚೌಕಟ್ಟುಗಳ ಅನುಷ್ಠಾನಕ್ಕಾಗಿ ವೃತ್ತಿಪರ ಅಧಿಕಾರಶಾಹಿಯ ಆಡಳಿತ
ಉಪಕರಣವನ್ನೇ ತಯಾರಿಸಿತು.
ಸಾಮಾನ್ಯ ಯುಗ ಪೂರ್ವ 6ನೇ
ಶತಮಾನದಲ್ಲಿ ಗಣ
ಸಂಘಗಳು
ಪ್ರಾಚೀನ ಭಾರತದ
ವಿಶಿಷ್ಟ ರಾಜಕೀಯ
ವ್ಯವಸ್ಥೆಯಾಗಿ ಬೆಳೆದವು. ರಾಜಪ್ರಭುತ್ವಕ್ಕೆ ವ್ಯತಿರಿಕ್ತವಾಗಿ, ಇಲ್ಲಿ
ಅಧಿಕಾರವು ಒಬ್ಬ
ವ್ಯಕ್ತಿಯ ಕೈಯಲ್ಲಿರದೆ, ಅನೇಕ
ನಾಯಕರು
ಅಥವಾ
ಕುಲಗಳ
ಗುಂಪಿನ
(ಗಣ)
ಕೈಯಲ್ಲಿತ್ತು. ನಂತರ
ಭಾರತ
ಮೌರ್ಯ
ಸಾಮ್ರಾಜ್ಯದಂತಹ ಪ್ರಬಲ
ರಾಜಪ್ರಭುತ್ವದ ಆಡಳಿತಕ್ಕೂ ಒಳಗಾಯಿತು.
ಮಧ್ಯಕಾಲೀನ
ಯುಗ:
ಸಾಮಾನ್ಯ ಯುಗ ಹೆಚ್ಚು-ಕಮ್ಮಿ
500–1500ರ ಅವಧಿಯ ಮಧ್ಯಕಾಲೀನ ಯುಗದಲ್ಲಿ ಯುರೋಪಿನಲ್ಲಿ ಬಲಿಷ್ಠವಾಗಿದ್ದ ಕೇಂದ್ರೀಯ ಅಧಿಕಾರ
ಛಿದ್ರಗೊಂಡು ವಿಭಜಿತವಾಗಿ ಭೂಹಿಡುವಳಿ, ಊಳಿಗಮಾನ್ಯ ಪದ್ಧತಿ
ಹುಟ್ಟಿಕೊಂಡಿತು. ಈ ಮೂಲಕ
ಜನ
ಹೇಗೆ
ಬದುಕಬೇಕು ಎಂಬ
ನಿರ್ಧಾರ ಕೈಗೊಳ್ಳಲಾಯಿತು.
ಅಲ್ಲದೇ ಧಾರ್ಮಿಕ ಅಧಿಕಾರಿಗಳ ಪ್ರಭಾವ
ಹೆಚ್ಚಾಯಿತು – ಯುರೋಪಿನಲ್ಲಿ ಕ್ರೈಸ್ತ ಧರ್ಮದ
ಮುಖಂಡ
ಪೋಪ್ ಅವರ
ಅಧೀನದಲ್ಲಿದ್ದ Papacy ಅಧಿಕಾರಿಗಳು, ಪಶ್ಚಿಮ
ಏಷ್ಯಾದಲ್ಲಿ ಪ್ರವಾದಿ ಮುಹಮ್ಮದ್ ಅವರ
ರಾಜಕೀಯ
ಮತ್ತು
ಧಾರ್ಮಿಕ ಉತ್ತರಾಧಿಕಾರಿಗಳಾದ Caliphates ರಾಜ್ಯಭಾರ ಮುಂಚೂಣಿಯಲ್ಲಿ ಬಂದವು. ಯಹೂದಿ ಧರ್ಮದ
ಗುರುಗಳಾದ ರಬ್ಬಿಗಳು ಸಮಾಜ ನಾಯಕರಾಗಿ ಭಲವಾಗಿ ರೂಪುಗೊಂಡು, ಯಹೂದಿ ಕಾನೂನಿನ ಅನ್ವಯ
ಜನರ
ದೈನಂದಿನ ಜೀವನದಲ್ಲಿ ಮಾರ್ಗದರ್ಶನ ನೀಡಿದರು.
ಆಧುನಿಕ
ಯುಗ:
ಸಾಮಾನ್ಯ ಯುಗ 1500ರಿಂದ ಸುಮಾರಾಗಿ ಪ್ರಾರಂಭವಾದ ಆಧುನಿಕ
ಯುಗದಲ್ಲಿ ಖಗೋಳಶಾಸ್ತ್ರ, ಭೌತಶಾಸ್ತ್ರ ಮತ್ತು
ಜೀವಶಾಸ್ತ್ರದಲ್ಲಿನ ಆವಿಷ್ಕಾರಗಳು ವೈಜ್ಞಾನಿಕ ಕ್ರಾಂತಿ (Scientific Revolution)ಗೆ ಕಾರಣವಾದವು. ಇದರ
ಪರಿಣಾಮ
ಸಾಮಾಜಿಕ ಹಾಗೂ
ರಾಜಕೀಯ
ಕ್ಷೇತ್ರಗಳಲ್ಲೂ ಬದಲಾವಣೆಗಳು ಕಂಡುಬಂದವು.
ಈ ಜ್ಞಾನೋದಯದ
ಯುಗ (Enlightenment Era) ದಲ್ಲಿ ಎಲ್ಲೆಡೆ ರಾಜಪ್ರಭುತ್ವಗಳು ಶಿಥಿಲಗೊಂಡು ರಾಷ್ಟ್ರ-ರಾಜ್ಯಗಳ ಅಭಿವೃದ್ಧಿ ಆಗತೊಡಗಿತು. ಗಣರಾಜ್ಯಗಳು ಸಾಂವಿಧಾನಿಕ ಪ್ರಜಾಪ್ರಭುತ್ವದ ತತ್ವಗಳನ್ನು ಅಳವಡಿಸಿಕೊಂಡವು. ವೈಯಕ್ತಿಕ ಹಕ್ಕುಗಳು ಮತ್ತು
ಜನಪ್ರಿಯ ಸಾರ್ವಭೌಮತ್ವ ಹೆಚ್ಚಿಸಲ್ಪಟ್ಟವು. ಈ
ಯುಗದಲ್ಲಿ ಫ್ರೆಂಚ್ ಮತ್ತು
ರಷ್ಯನ್ ಕ್ರಾಂತಿಗಳು ಜಾಗತಿಕ ಬದಲಾವಣೆಗಳ
ಚಾಲನೆಗೆ ವೇಗ ಹೆಚ್ಚಿಸಿದವು.
20ನೇ
ಮತ್ತು
21ನೇ
ಶತಮಾನಗಳಲ್ಲಿ ನಮಗೆ
ಕಾಣಿಸಿಕೊಳ್ಳುವುದು – ಈ
ಜನಪ್ರಿಯ ಸಾರ್ವಭೌಮತ್ವದ ನಿಯಂತ್ರಣ ಯಾವ
ಸಿದ್ಧಾಂತದವರ ಕೈಯಲ್ಲಿದೆ ಎಂಬ ದ್ವಂದ್ವ. ವ್ಯಕ್ತಿ ಸ್ವಾತಂತ್ರ್ಯಕ್ಕೆ ಒತ್ತು
ನೀಡಿ
Free Market ವ್ಯವಸ್ಥೆಯನ್ನು ಪ್ರತಿಪಾದಿಸುವವರದ್ದೋ, ಅಥವಾ
ಸ್ವಾತಂತ್ರ್ಯದ ಜೊತೆಗೆ
ನ್ಯಾಯ,
ಸಮತೆ
ಹಾಗೂ
ಭ್ರಾತೃತ್ವಕ್ಕೆ ಮಹತ್ವ
ನೀಡುವವರದ್ದೋ ಎಂಬುದು.
ಇವೆಲ್ಲದಕ್ಕೂ ಹೊಸ
ಯುಗದ
ತಂತ್ರಜ್ಞಾನಗಳನ್ನು – A.I., Surveillance, Automation ಇತ್ಯಾದಿಗಳನ್ನು
ಬೆರೆಸಿದರೆ, “ರಾಜಕೀಯ” ಪದದ
ಪ್ರಸ್ತುತ ರೂಪರೇಖೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ.
ಮುಂದುವರಿಯುತ್ತದೆ...
No comments:
Post a Comment