![]() |
| Dancing Shiva - Badami Caves.. |
ಭರತಖಂಡ – ನಾಟ್ಯಶಾಸ್ತ್ರ
ನಾಟಕೀಯ ನಿರೂಪಣೆ (Dramatic
Narrative) ಮತ್ತು Classical
Decoupage (ಕ್ಲಾಸಿಕಲ್
ಡೆಕ್ಯುಪಾಜ್)
ಜಾಗತಿಕ ಸಿನಿಮಾರಂಗದಲ್ಲಿ ಪ್ರಬಲ ಮೆಟಾ-ನೆರೇಟಿವ್‌ಗಳಾಗಿವೆ. ಆದರೆ ನಾವು ಭಾರತ
ದೇಶದ ಚಲನಚಿತ್ರಗಳಿಗೆ ನಮ್ಮನ್ನು ಸೀಮಿತಗೊಳಿಸಿದರೆ, ನಾಟ್ಯಶಾಸ್ತ್ರ ಆಧರಿತ ನಿರೂಪಣಾ ಶೈಲಿಗಳೇ ಪ್ರಬಲವಾಗಿವೆ.
ನಮ್ಮ ಸಿನಿಮಾಗಳು ಜಗತ್ತಿನ
ಹೆಚ್ಚಿನ ಸಿನಿಮಾಗಳಂತೆ ಹಾಲಿವುಡ್ ಜನಪ್ರಿಯಗೊಳಿಸಿದ Classical
Decoupage ವಿಧಾನವನ್ನೇ
ತಮ್ಮದಾಗಿಸಿಕೊಂಡಿವೆ. ಆದರೆ ನಿರೂಪಣಾ ಶೈಲಿಯಲ್ಲಿ
“ಕ್ರಿಯೆಯ ಏಕತೆ” (Unity of
Action) ಕಂಡುಬಂದರೂ,
ಈ ಏಕತೆಯನ್ನು ಭಂಗಗೊಳಿಸುವಂತಹ ಅನೇಕ ಘಟನೆಗಳು ನಮ್ಮ
ಸಿನಿಮಾಗಳಲ್ಲಿ ನಡೆಯುತ್ತಲೇ ಇರುತ್ತವೆ.
ಉದಾಹರಣೆಗಳು:
· ಮುಖ್ಯ
ಕಥೆಗೆ ಭಿನ್ನವಾಗಿ ನಿಲ್ಲುವ ನಾಟ್ಯಶಾಸ್ತ್ರದ ವಿದೂಷಕ ಪಾತ್ರ ಆಧರಿತ ಕಾಮಿಡಿ ಟ್ರ್ಯಾಕ್‌ಗಳು
(Comedy Tracks).
· ಕೈಶಿಕಿ
ವೃತ್ತಿ ಆಧರಿತ ಶೃಂಗಾರ ಪ್ರಧಾನ ಸಂಗೀತ–ನೃತ್ಯಗಳಿಂದ ಕೂಡಿದ ಲಾಸ್ಯ ಶೈಲಿಯ ಬಳಕೆ, ಮತ್ತು ಅದರ ಒರಟು ರೂಪವಾದ
ಐಟಂ ನಂಬರ್‌ಗಳು (Item Numbers).
· “ನಾಟ್ಯದಲ್ಲಿ
ಎಲ್ಲವೂ ಇರುತ್ತದೆ” ಎಂಬ ನಾಟ್ಯಶಾಸ್ತ್ರದ ಸೂಕ್ತಿಯಂತೆ,
ಒಂದೇ ಸಿನಿಮಾದಲ್ಲಿ ಹಲವಾರು
ರಸಗಳ ಸೂಕ್ತ ಮಿಶ್ರಣ.
ಇವು, ನಮ್ಮ ಸಿನಿಮಾಗಳಲ್ಲಿ
ಕೇಂದ್ರಾಪಗಾಮಿ
(Centrifugal) ಪ್ರವೃತ್ತಿಯನ್ನು
ಸೂಚಿಸುತ್ತವೆ. ಜಾಗತಿಕ ಸಿನಿಮಾದ ಪ್ರಮುಖ ಪ್ರವೃತ್ತಿ ಹೆಚ್ಚಾಗಿ ಕೇಂದ್ರಾಭಿಮುಖ (Centripetal)
ಆಗಿರುವುದರಿಂದ, ಹೋಲಿಕೆಯಲ್ಲಿ ನಮ್ಮ ಈ ಪರಂಪರೆ
ವಿಶ್ವ ಮಟ್ಟದಲ್ಲಿ ಒಂದು Micro Narrative
(ಲಘು ನಿರೂಪಣೆ) ಆಗಿ ಕಾಣಿಸುತ್ತದೆ.
ನಾಟ್ಯಶಾಸ್ತ್ರದ
ಸಂದರ್ಭ:
ಭಾರತೀಯ ಸಿನಿಮಾ ಪೂರ್ವನಿಯೋಜಿತವಾಗಿ (by default) ಬಳಸುತ್ತಿರುವ ನಾಟ್ಯಶಾಸ್ತ್ರದ ಭಾಷೆ
ಯಾವ
ಪರಿಸ್ಥಿತಿಯಲ್ಲಿ ಹುಟ್ಟಿಕೊಂಡಿತು? ನಾಟ್ಯಶಾಸ್ತ್ರದ ಮೊದಲ
ಅಧ್ಯಾಯವೇ ಹೇಳುತ್ತದೆ – ಕೃತಯುಗ
ಮುಗಿದು
ತ್ರೇತಾಯುಗ ಆರಂಭವಾಗುತ್ತಿದ್ದಾಗ, ಧರ್ಮ
ಪಾಲನೆಯಾಗದೆ ಜನರು
ಸುಖ–ದುಃಖ, ಅಸೂಯೆ ಮತ್ತು
ಅತಿಯಾದ
ಆಸೆಗಳಿಗೆ ಒಳಗಾಗಿದ್ದರು. ಜನರ
ಗಮನ
ಬೇರೆಡೆ
ಸೆಳೆಯಲು ಮನರಂಜನೆಗಾಗಿ ಬ್ರಹ್ಮನು ನಾಲ್ಕು
ವೇದಗಳಿಂದ ಅಂಶಗಳನ್ನು ತೆಗೆದು
“ನಾಟ್ಯವೇದ”ವನ್ನು
ರಚಿಸಿದನು.
ಎಲ್ಲಾ ವರ್ಣಗಳಿಗೆ (ಈಗಿನ
ಸಂದರ್ಭ
– ಜಾತಿ)
ವೇದಗಳು
ಲಭ್ಯವಿರದ ಕಾರಣ,
ನಾಟ್ಯವೇದದ ಮೂಲಕ,
ದೃಶ್ಯ
ಮತ್ತು
ಶ್ರವ್ಯ
ಮಾಧ್ಯಮಗಳಲ್ಲಿ ಮನರಂಜನೆಯ ಜೊತೆಗೆ
ವೇದಗಳಲ್ಲಿರುವ ಮೌಲ್ಯಗಳ ಬಗ್ಗೆಯೂ ಶಿಕ್ಷಣ
ನೀಡಬಹುದು ಎಂಬ ಆಶಯ ಕೂಡಾ ಇತ್ತು. ವೇದಗಳನ್ನು
ಎಲ್ಲಾ ವರ್ಣಗಳಿಗೆ ನಿಜವಾಗಿಯೂ ತೆರೆದಿಡದೆ, ಮನೋರಂಜನೆಯ ಮೂಲಕ ಅವುಗಳ ಸಾರಾಂಶವನ್ನು ಮಾತ್ರ ಜನರಿಗೆ
ತಲುಪಿಸುವ ಹುನ್ನಾರ ಈ ನಾಟ್ಯಶಾಸ್ತ್ರದ್ದು. ಇಲ್ಲಿ ನಮಗೆ
ನಿಜವಾಗಿಯೂ ಕಾಣಸಿಗುವುದು ಅವಕಾಶವಾದದ ಪೊಳ್ಳು
ಔದಾರ್ಯ,
ತಾರತಮ್ಯ, ಪ್ರಚಾರ
ಹಾಗೂ
ಗುಣ / ಜಾತಿ ಶ್ರೇಣೀಕರಣ.
ಪೂರ್ವನಿಯೋಜಿತವಾಗಿ
Black and White:
ಬ್ರಹ್ಮನು ಭರತನಿಗೆ ವಹಿಸಿಕೊಟ್ಟ ಮೊದಲ ರಂಗಪ್ರದರ್ಶನವು ಅಸುರರು
ಮತ್ತು
ದಾನವರ
ಮೇಲೆ
ದೇವತೆಗಳ ವಿಜಯಕ್ಕೆ ಸಂಬಂಧಿಸಿದೆ. ಈ
ಕಾರಣಕ್ಕಾಗಿ ನೊಂದ
ದೈತ್ಯರು, ದಾನವರು
ಹಾಗೂ
ಇತರ ಅಸುರರು ಬ್ರಹ್ಮನಿಗೆ ದೂರುತ್ತಾರೆ – “ಹೊಸದಾಗಿ ಪರಿಚಯಿಸಿದ ನಾಟ್ಯಕಲೆ ದೇವತೆಗಳಿಗೆ ಮಾತ್ರ
ಒಲವು
ತೋರುತ್ತಿದೆ. ನಾವೆಲ್ಲರೂ ನಿಮ್ಮ (ಬ್ರಹ್ಮನ) ಮಕ್ಕಳಾಗಿರುವುದರಿಂದ ಇಂತಹ
ತಾರತಮ್ಯ ಮಾಡಬಾರದು.”
ಅವರಿಗೆ ಸಾಂತ್ವನ ನೀಡುವ
ನೆಪದಲ್ಲಿ ಬ್ರಹ್ಮನು ಹೇಳುತ್ತಾನೆ – “ನಾಟ್ಯವೇದದಲ್ಲಿ ಎಲ್ಲವೂ
ಇದೆ,
ಎಲ್ಲರ
ಅನುಕರಣೆಯೂ ಆಗುತ್ತದೆ. ಅದು
ದೇವತೆ
ಮತ್ತು
ಅಸುರರ
ಒಳ್ಳೆಯ–ಕೆಟ್ಟ ಆಲೋಚನೆಗಳನ್ನೂ ಒಳಗೊಂಡಿದೆ.” ಆದರೆ,
ದೈತ್ಯರು ನೊಂದ
ಪರಿಯನ್ನು ಗಮನಿಸಿದರೆ ಹಾಗೂ ಅವರು
ಭರತನ
ಮೊದಲ
ಪ್ರದರ್ಶನಕ್ಕೆ ವಿಘ್ನಗಳನ್ನು ಒಡ್ಡಲು
ಮಾಡಿದ
ಪ್ರಯತ್ನಗಳನ್ನು ಪರಿಗಣಿಸಿದರೆ, ಅಸುರರ
ದೃಷ್ಟಿಕೋನವನ್ನು ನಾಟ್ಯಶಾಸ್ತ್ರದಲ್ಲಿ ಪ್ರತಿನಿಧಿಸಲಾಗಿಲ್ಲವೆಂಬುದು ಸ್ಪಷ್ಟವಾಗುತ್ತದೆ.
ಹೀಗಾಗಿ, ಪೂರ್ವನಿಯೋಜಿತವಾಗಿ ಒಂದು
ಸಾಂಸೃತಿಕ ಕಥನ (narrative) ಸಿದ್ಧವಾಗಿದೆ – ದೈತ್ಯರು, ದಾನವರು,
ವಿಘ್ನ ಒಡ್ಡುವವರು ಹಾಗೂ
ಇತರ ಅಸುರರು ಧರ್ಮದ ಪಥಕ್ಕೆ ಅಡ್ಡಿ
ಮಾಡುವವರಾಗಿರುತ್ತಾರೆ. ಅವರ
ಸೋಲಿನಲ್ಲೇ ಇರುವುದು ಧರ್ಮದ ಫಥ, ೀ
ಸೋಲಿನಿಂದಲೇ ಋತದ ಚಲನೆಗೆ ಮತ್ತೆ
ಸಮತೋಲನ
ಬರುವುದು. ಈ ಸಾಂಸೃತಿಕ ಕಥನ (narrative)ದಲ್ಲಿ
ಬ್ರಹ್ಮನು ದೈತ್ಯರಿಗೆ
ಆಶ್ವಾಸನೆ ಕೊಟ್ಟಂತೆ ಅಸುರರ ಒಳ್ಳೆಯ ಗುಣಗಳಿಗೆ ಪ್ರಾತಿನಿಧ್ಯ ಎಲ್ಲಿ
ಬಂತು?
ದೇವತೆಗಳ ಕೆಟ್ಟ
ಗುಣ
ಎಲ್ಲಿ
ಬಂತು?
ಎಲ್ಲವೂ
black and white ಆಗಿ ಉಳಿದು ಬಿಟ್ಟಿದೆ.
ಅಸುರರು – ಒಂದು Micro
Narrative (ಲಘು ನಿರೂಪಣೆ):
ಆರಂಭಿಕ ಋಗ್ವೇದದಲ್ಲಿ “ಅಸುರ” ಎಂಬುದು
ದೇವತೆಗಳಿಗೆ ನೀಡುವ
ಗೌರವಯುತ ಪದವಾಗಿತ್ತು. ಇದರರ್ಥ
“ಬಲಶಾಲಿ”
ಅಥವಾ
“ಪ್ರಭು”.
ಇರಾನಿನ ಪುರಾತನ ಧರ್ಮಗ್ರಂಥ ಅವೆಸ್ತಾದಲ್ಲಿ
ಸರ್ವೋಚ್ಚ ದೇವನನ್ನು “ಅಹುರ ಮಜ್ದಾ” (Ahura Mazda) ಎಂದು ಕರೆಯಲಾಗುತ್ತದೆ. ಭಾಷಾವಿಜ್ಞಾನಿಗಳ ಪ್ರಕಾರ
ವೈದಿಕ
ಸಂಸ್ಕೃತ ಮತ್ತು
ಅವೆಸ್ತನ್ ಭಾಷೆಗಳು “ಇಂಡೋ–ಇರಾನಿಯನ್” ಮೂಲದ
ಒಂದೇ
ಕುಟುಂಬಕ್ಕೆ ಸೇರಿವೆ.
ಹೀಗಾಗಿ
ಸಂಸ್ಕೃತದ “ಅಸುರ” ಮತ್ತು
ಪರ್ಷಿಯನ್ “ಅಹುರ” ಸಮಾನಾಂತರ ಪದಗಳಾಗಿವೆ.
ಇತಿಹಾಸಕಾರರ
ಅಭಿಪ್ರಾಯಗಳು:
ಇತಿಹಾಸಕಾರ ರೊಮಿಲಾ
ಥಾಪರ್ ತಮ್ಮ
Ancient Indian Social History: Some Interpretations ಸೇರಿದಂತೆ ಅನೇಕ ಕೃತಿಗಳಲ್ಲಿ, ವೈದಿಕ
ಸಾಹಿತ್ಯವು “ಇತರರನ್ನು” ಕಪ್ಪು ಚರ್ಮದವರು, ವಿದೇಶಿ
ಭಾಷೆಗಳನ್ನು ಮಾತನಾಡುವವರು ಮತ್ತು
ಯಾವುದೇ
ಆಚರಣೆಗಳನ್ನು ಹೊಂದಿರದವರು ಎಂದು
ವಿವರಿಸುತ್ತದೆ ಎಂದು
ಗಮನ
ಸೆಳೆದಿದ್ದಾರೆ. ಈ
ವಿವರಣೆಗಳಿಂದ ನಂತರ
ಅವರನ್ನು “ರಾಕ್ಷಸರಾಗಿ” ಶೈಲೀಕರಿಸಲಾಗಿರಬಹುದು ಎಂಬ
ಅರ್ಥೈಸುವಿಕೆಯನ್ನು ನೀಡುತ್ತಾರೆ.
ಅಸುರರು ಮತ್ತು ರಾಕ್ಷಸರು ಅಲೌಕಿಕ
ಜೀವಿಗಳಲ್ಲ, ಬದಲಾಗಿ
ನಿಜವಾದ
ಮಾನವ
ಸಮುದಾಯಗಳು – ಬುಡಕಟ್ಟು ಜನಾಂಗದವರು. ವೈದಿಕ
ಬರಹಗಾರರು ತಮ್ಮ
ಕಥೆಗಳಲ್ಲಿ ಅವರನ್ನು ಅಂಚಿನಲ್ಲಿಡಲು “ರಾಕ್ಷಸರಾಗಿ” ಪರಿವರ್ತಿಸಿದರು ಎಂದು
ಅಂಬೇಡ್ಕರ್ ತಮ್ಮ
Who Were the Shudras? ಕೃತಿಯಲ್ಲಿ ನಿರ್ದಿಷ್ಟವಾಗಿ ವಾದಿಸುತ್ತಾರೆ.
ಮುಂದುವರಿಯುವುದು...
_(14146091479).jpg)
No comments:
Post a Comment