![]() |
| The Birth of a Nation |
ಪ್ರಬಲ ಸಿದ್ಧಾಂತದ ಸಿನಿಮೀಯ ಭಾಷೆ
ಪ್ರಬಲ ಸಿದ್ಧಾಂತವು ಜನರ
ಸಂವೇದನಾಶೀಲತೆಯ lowest common denominator ಅನ್ನು ಬಳಸಿಕೊಂಡು ತನ್ನದೇ
ಆದ
ಒಂದು
ಭಾಷೆಯನ್ನು ರೂಪಿಸಿಕೊಳ್ಳುತ್ತದೆ. ಈ
ಭಾಷೆಗೆ
ಸ್ಪಂದಿಸಲು ಜನರಿಗೆ
ಹೆಚ್ಚು
ಆಲೋಚನೆ
ಮಾಡುವ
ಅಗತ್ಯವಿರುವುದಿಲ್ಲ. ಅದಲ್ಲದೆ, ಪ್ರಬಲ
ಸಿದ್ಧಾಂತವು ಹೀಗೆ
ಬೆಳೆಸಿಕೊಂಡ ಭಾಷೆಯನ್ನು ತನಗೆ
ಲಭ್ಯವಿರುವ ಅಪಾರ
ಸಾಧನೆ
ಹಾಗೂ
ಸಂಪನ್ಮೂಲಗಳ ಮೂಲಕ
ಜನರ
ಮೇಲೆ ಸತತವಾಗಿ ಹೇರುತ್ತಲೇ ಇರುತ್ತದೆ.
ಇದು ಎಲ್ಲಿಯವರೆಗೆ ಬಂದು
ತಲುಪಿದೆ ಅಂದರೆ
– ಈ
ಭಾಷೆ/ರೂಪವನ್ನು ಬಳಸದೇ ಇರುವ ಚಲನಚಿತ್ರಗಳು, ಚಲನಚಿತ್ರಗಳೇ ಅಲ್ಲ
ಎಂಬ
ಅಭಿಪ್ರಾಯ ಹುಟ್ಟಿಕೊಂಡ ಪರಿಸ್ಥಿತಿ ಬಂದಿದೆ.
ಸಾಮಾನ್ಯವಾಗಿ ಪ್ರಬಲ
ಸಿದ್ಧಾಂತದ ಸಿನಿಮಾಗಳ ನಿರೂಪಣೆಯು Dramatic Narrative (ನಾಟಕೀಯ
ನಿರೂಪಣೆ) ಶೈಲಿಯಲ್ಲಿದ್ದು, ಅದರ
ಸಿನಿಮೀಯ ಭಾಷೆ
Classical Decoupage (ಕ್ಲಾಸಿಕಲ್ ಡೆಕ್ಯಪಾಜ್) ಆಗಿರುತ್ತದೆ.
Dramatic Narrative (ನಾಟಕೀಯ ನಿರೂಪಣೆ):
Dramatic Narrative
ಶೈಲಿಯಲ್ಲಿ ಅರಿಸ್ಟಾಟಲ್ (Aristotle) ಹೇಳಿರುವ Unity of Action (ಕ್ರಿಯೆಯ
ಏಕತೆ) ಅವಲಂಬನೆ ಇದೆ.
ಉದಾಹರಣೆಗೆ, 1972ರಲ್ಲಿ ಬಿಡುಗಡೆಯಾದ Godfather ಚಿತ್ರದ ಏಕ ಕ್ರಿಯೆ ಹೀಗಿದೆ
– ತನ್ನ
ಕುಟುಂಬದ ಅಕ್ರಮ
ವ್ಯವಹಾರಗಳಿಂದ ದೂರವಿರಲು ಬಯಸುವ
ಮೈಕಲ್ ಕೊರ್ಲಿಯೋನ್ (Michael Corleone), ತನ್ನ ತಂದೆಯ
ಮೇಲಿನ
ಘಾತಕ
ಹಲ್ಲೆಯ
ನಂತರ
ಅನಿವಾರ್ಯವಾಗಿ ಮಾಫಿಯಾ
ಜಗತ್ತನ್ನು ಪ್ರವೇಶಿಸಿ, ಕೊನೆಗೆ
ಅತ್ಯಂತ
ಕ್ರೂರ
ಡಾನ್
ಆಗಿ
ಪರಿವರ್ತನೆಗೊಳ್ಳುತ್ತಾನೆ.
ಈ ಕಟ್ಟುನಿಟ್ಟಿನ ಚೌಕಟ್ಟಿನೊಳಗೆ ಹಲವಾರು
ಪುಟ್ಟ
ಘಟನೆಗಳು ನಡೆಯುತ್ತವೆ. ಒಂದು
ಕ್ರಿಯೆ
ಮುಗಿದಾಗ ಅದು
ನೇರವಾಗಿ ಮುಂದಿನ
ಪರಿಣಾಮವನ್ನು ಸೃಷ್ಟಿಸುತ್ತದೆ; ಆ
ಪರಿಣಾಮದಿಂದ ಮತ್ತೊಂದು ಕ್ರಿಯೆ
ಹುಟ್ಟುತ್ತದೆ; ಮತ್ತದರಿಂದ ಮತ್ತೊಂದು ಪರಿಣಾಮ
ಮತ್ತು
ಕ್ರಿಯೆ.
ಹೀಗೆ
Cause and Effect ಸರಪಳಿಯಂತೆ ತಾರ್ಕಿಕವಾಗಿ ಮುಂದುವರಿಯುವ ಘಟನೆಗಳ
ಸರಣಿ–ಘರ್ಷಣೆಗಳು ಚಲನಚಿತ್ರದ ಏಕ ಕ್ರಿಯೆಯ ಕೊನೆಯವರೆಗೆ ಪ್ರೇಕ್ಷಕರನ್ನು ಕೊಂಡೊಯ್ಯುತ್ತವೆ.
ಅದರೊಂದಿಗೆ, ಈ ಪ್ರಗತಿ ಪ್ರೇಕ್ಷಕರಲ್ಲಿ
ಭಾವನಾತ್ಮಕ ಅಂಶವನ್ನು ಹಂತ
ಹಂತವಾಗಿ ಹೆಚ್ಚಿಸುತ್ತವೆ. ಈ
ವ್ಯವಸ್ಥೆ ಪ್ರೇಕ್ಷಕರನ್ನು ಅಂಕುಶದಿಂದ ಹಿಡಿದು
ಮಾರ್ಗದರ್ಶನ ಮಾಡುತ್ತಾ, ಕೊನೆಯಲ್ಲಿ ಏಕ ಕ್ರಿಯೆ ಮುಗಿದು ‘ಕ್ಯಾಥರ್ಸಿಸ್’ (Catharsis) / ಭಾವವಿರೇಚನೆಯ ಅನುಭವವಾದ ಮೇಲೆಯೇ
ಅವರನ್ನು ಬಂಧನಮುಕ್ತರನ್ನಾಗಿ ಮಾಡುತ್ತದೆ.
ಈ ಶೈಲಿ ಪ್ರಚಾರ ಸಿನಿಮಾಗಳಿಗೆ (Propaganda Cinema) ಹೇಳಿ ಮಾಡಿಸಿದಂತದ್ದು ಎಂಬ
ಅನುಮಾನ
ಬಂದರೆ,
ಅದು
ಸಹಜ.
ಈ Dramatic Narrative
(ನಾಟಕೀಯ ನಿರೂಪಣೆ) ಶೈಲಿಗೆ ಹೊಂದುವಂತಹ ಸಿನಿಮಾ ಭಾಷೆಯೊಂದಿದ್ದರೆ ಅದು Classical Decoupage
(ಕ್ಲಾಸಿಕಲ್ ಡೆಕ್ಯುಪಾಜ್) ಆಗಿರುತ್ತದೆ.
ಡೆಕ್ಯುಪಾಜ್ ಪದದ ಮೂಲ:
ಡೆಕ್ಯುಪಾಜ್ ಫ್ರೆಂಚ್ ಭಾಷೆಯ ಪದ. "ದೆಕೂಪೆ" (découper) ಎಂದರೆ
"ಕತ್ತರಿಸುವುದು" ಅಥವಾ “ವಿಭಜಿಸಿ ತೆಗೆಯುವುದು". ಸಾಮಾನ್ಯ
ಬಳಕೆಯಲ್ಲಿ ಡೆಕ್ಯುಪಾಜ್ ಅಂದರೆ ವಸ್ತುಗಳನ್ನು ಅಲಂಕರಿಸುವ ಒಂದು ಕಲೆಯಾಗಿದೆ. ಚಿತ್ರಗಳು, ಕಾಗದದ
ತುಂಡುಗಳು ಅಥವಾ ತೆಳುವಾದ ಪ್ಲಾಸ್ಟಿಕ್ ಹಾಳೆಗಳನ್ನು ಕತ್ತರಿಸಿ ಅವುಗಳನ್ನು ಮರದ, ಗಾಜು, ಲೋಹ,
ಪ್ಲಾಸ್ಟಿಕ್ ಮುಂತಾದ ವಸ್ತುಗಳ ಮೇಲೆ ಅಂಟಿಸಿ ನಂತರ ಅವುಗಳನ್ನು ವಾರ್ನಿಷ್ ಮಾಡುವುದು. ಅಂಟಿಸಿದ ಅಲಂಕಾರಿಕ
ತುಂಡುಗಳು ಚಿತ್ರ ಬರೆದಂತೆ ಕಾಣುತ್ತವೆ.
ಚಲನಚಿತ್ರಗಳಲ್ಲಿ ಡೆಕ್ಯುಪಾಜ್:
ಚಲನಚಿತ್ರಗಳಲ್ಲಿ ಡೆಕ್ಯುಪಾಜ್ ಎಂದರೆ ಚಿತ್ರಕಥೆಯನ್ನು ಚಿತ್ರೀಕರಣಕ್ಕೆ ಸಿದ್ಧಪಡಿಸುವ ಒಂದು ವಿಧಾನ. ಚಿತ್ರಕಥೆಯಲ್ಲಿ ಬರೆದ ಒಂದು ಘಟನೆ ಒಂದು ನಿರ್ದಿಷ್ಟ ಸ್ಥಳದಲ್ಲಿ ಹಾಗೂ ಒಂದು ನಿರ್ದಿಷ್ಟ ಕಾಲದೊಳಗೆ ಘಟಿಸುತ್ತದೆ. ಚಿತ್ರೀಕರಣಕ್ಕೂ ಮುಂಚೆಯೇ ಘಟನೆಗಳನ್ನು ವಿವಿಧ ಶಾಟ್‌ಗಳಾಗಿ (shots) ʼಕತ್ತರಿಸಿʼ ಅಥವಾ ʼವಿಭಜಿಸಿ ತೆಗೆಯುವʼ ಪ್ರಕ್ರಿಯೆಗೆ ಸಿನಿಮಾದ ಪರಿಭಾಷೆಯಲ್ಲಿ ಡೆಕ್ಯುಪಾಜ್ ಎಂದು ಕರೆಯಲಾಗುತ್ತದೆ. ಇಲ್ಲಿ ಕತ್ತರಿಸಿ ತೆಗೆಯುವುದು ಘಟನೆಯ ಉಪ ಘಟಕಗಳನ್ನು (sub-units). ಅಥವಾ ಇನ್ನೊಂದು ಅರ್ಥದಲ್ಲಿ ಘಟನೆ ನಡೆಯುವ ಸ್ಥಳ ಹಾಗೂ ಕಾಲದ ಉಪ ಘಟಕಗಳನ್ನು. ಯಾವ ಶಾಟ್ ಯಾವ ರೀತಿ ತೆಗೆಯಬೇಕು, ಕ್ಯಾಮೆರಾ ಚಲನೆ ಹೇಗಿರಬೇಕು, ನಟರ ಸ್ಥಾನ, ಫ್ರೇಮಿಂಗ್, ಧ್ವನಿಗಳು ಇತ್ಯಾದಿ ಎಲ್ಲವನ್ನೂ ಯೋಚಿಸುವುದೇ ಡೆಕ್ಯುಪಾಜ್.
Classical
Decoupage (ಕ್ಲಾಸಿಕಲ್
ಡೆಕ್ಯುಪಾಜ್):
Classical Decoupage (ಕ್ಲಾಸಿಕಲ್ ಡೆಕ್ಯುಪೇಜ್) ಎಂಬುದು ಚಲನಚಿತ್ರ ನಿರ್ಮಾಣದ ಹಾಲಿವುಡ್ ಶೈಲಿಯ ಭಾಷೆ. 1915 ಇಸವಿಯಲ್ಲಿ ಡಿ. ಡಬ್ಲ್ಯೂ. ಗ್ರಿಫಿತ್ (D.W. Griffith) ಎಂಬ ಅಮೇರಿಕನ್ ನಿರ್ದೇಶಕ ʼಧಿ ಬರ್ತ್ ಆಫ್ ಎ ನೇಶನ್ʼ (The Birth of a Nation) ಎಂಬ ವರ್ಣಭೇದ ನೀತಿಯನ್ನು ಪ್ರತಿಪಾದಿಸುವ (Racist) ಚಲನಚಿತ್ರವನ್ನು ತಯಾರಿಸಿ, ಅದರಲ್ಲಿ ಈ ರೀತಿಯ ಸಿನಿಮೀಯ ಭಾಷೆಯ ರೂಪರೇಖೆಗಳನ್ನು ಜನರ ಮುಂದೆ ಬಿಚ್ಚಿಟ್ಟದರು. ಈ ಶೈಲಿಯಲ್ಲಿ ಘಟನೆಯ ವಿಭಜನೆಯು ಹೇಗಿರಬೇಕೆಂದರೆ ವೀಕ್ಷಕರು ಶಾಟ್ ಗಳನ್ನು ಗಮನಿಸಲೇಬಾರದು. ಅವು ಅದೃಶ್ಯವಾಗಿದ್ದರೆ ಮಾತ್ರ ಕಥೆ ಸ್ವಾಭಾವಿಕವಾಗಿ ಮುಂದೆ ಹರಿಯುತ್ತದೆ. ವಿಭಜಿಸಿದ ಘಟನೆಯನ್ನು ಮತ್ತೆ ಜೋಡಿಸಿದಾಗ ಘಟನೆಯ ನಿರಂತರತೆ (Continutiy) ಕಾಪಾಡಿಕೊಂಡಂತಿರಬೇಕು. ನಾವು ನಿಜ ಜೀವನದಲ್ಲಿ ಯಾವ ಆಧಾರದ ಮೇಲೆ ಘಟನೆಗಳ ಕೆಲವೇ ಭಾಗಗಳನ್ನು ನೋಡಿ ಘಟನೆಗಳ ಸಂಪೂರ್ಣತೆಯನ್ನು ಗ್ರಹಿಸುತ್ತೇವೆಯೋ, ಚಲನಚಿತ್ರದ Decoupage (ಡೆಕ್ಯುಪೇಜ್) ಕೂಡಾ ಹಾಗೇ ಮಾಡುವಂತಿರಬೇಕು.
ಮಾನವ ಗುಣದ ಅನುಕರಣೆ:
ನಮ್ಮ ಕಣ್ಣು ಮತ್ತು ಮನಸ್ಸುಗಳು ನಮಗೆ ಆಸಕ್ತಿ ಹುಟ್ಟಿಸುವ ಅಥವಾ ಆಕರ್ಷಿಸುವ
ವಿಷಯಗಳನ್ನು ಮಾತ್ರ ನೋಡುತ್ತವೆ ಮತ್ತು ಗ್ರಹಿಸುತ್ತವೆ.; ಘಟನೆಗಳ ಕೆಲವೇ
ಭಾಗಗಳನ್ನು ನೋಡಿ ಸಂಪೂರ್ಣತೆಯನ್ನು ಗ್ರಹಿಸುತ್ತೇವೆ.
Decoupage ಕೂಡಾ
ಅದೇ ರೀತಿಯಲ್ಲಿ ಕೆಲಸ ಮಾಡುತ್ತದೆ.
ಉದಾಹರಣೆಗೆ:
· ಮಾಲ್‌ನಲ್ಲಿ
ಜನಸಮೂಹದ ವಿಶಾಲ ದೃಶ್ಯವನ್ನು ನೋಡುತ್ತಿದ್ದರೂ, ಒಬ್ಬಂಟಿಯಾಗಿ ಆಡುತ್ತಿರುವ ಮುದ್ದಾದ ಪುಟ್ಟ ಮಗು ಕಂಡುಬಂದರೆ ನಮ್ಮ
ಗಮನ ತಕ್ಷಣ ಮಗುವಿನತ್ತ ಹರಿಯುತ್ತದೆ.
·
ತಾಯಿ
ಬಂದು ಮಗುವನ್ನು ಎತ್ತಿಕೊಂಡಾಗ ಗಮನ ತಾಯಿಯತ್ತ ತಿರುಗುತ್ತದೆ.
·
ಅವರು
ಹೊರಟು ಹೋದ ನಂತರ ಮತ್ತೆ
ಜನಸಮೂಹದ ದೃಶ್ಯಕ್ಕೆ ಗಮನ ಹಿಂತಿರುಗುತ್ತದೆ.
Classical
Decoupage ಶೈಲಿಯಲ್ಲಿ
ಘಟನೆ ವಿಭಜನೆಯು ಈ ಮಾನವ ಸ್ವಭಾವವನ್ನು
ಅನುಕರಿಸುತ್ತದೆ. ಹಾಗಾಗಿ ಈ ಸಿನಿಮೀಯ ಭಾಷೆ
ಪ್ರೇಕ್ಷಕರನ್ನು ಘಟನೆಯೊಳಗೆ ಸಂಪೂರ್ಣವಾಗಿ ತಲ್ಲೀನಗೊಳಿಸುತ್ತದೆ.
ಚಿತ್ರ ತಯಾರಕರು ಪ್ರೇಕ್ಷಕರು ಏನನ್ನು ನೋಡಬೇಕೆಂದು ಬಯಸುತ್ತಾರೋ, ಅದನ್ನು ಅವರು ಸಂಪೂರ್ಣವಾಗಿ ಅನುಭವಿಸುವಂತೆ ಮಾಡುತ್ತಾರೆ. ಹಾಗಾಗಿ, ಈ ಭಾಷೆ ಕೂಡಾ ಪ್ರಚಾರ
ಸಿನಿಮಾಗಳಿಗೆ (Propaganda
Cinema) ಹೇಳಿ ಮಾಡಿಸಿದಂತಿದೆ.
ಮುಂದುವರಿಯುವುದು...

No comments:
Post a Comment